Logo

ಸ್ಕಂದಗಿರಿ ಅನುಭವ

ಶ್ರೀ ಸತ್ಯನಾರಾಯಣ

2011ರ ಸುಮಾರು ವರ್ಷದಲ್ಲಿ ಆಗ ನನ್ನ ವಯಸ್ಸು ಸುಮಾರು 50ರ ಹತ್ತಿರವಿದ್ದು, ಬೆಂಗಳೂರಿನ ಬೆಡಗಿಗೆ ಬೇಸತ್ತ ನಾನು ಇಲ್ಲಿ ಅಂದರೆ ಚಿಕ್ಕಬಳ್ಳಾಪುರದಲ್ಲಿ ಒಂದು ನಿವೇಶನ ತೆಗೆದು ಮನೆ ಕಟ್ಟಿಸಿ ನನ್ನ ನಿವೃತ್ತಿಯ ನಂತರದ ಜೀವನವನ್ನು ನಡೆಸುವ ಉದ್ದೇಶದಿಂದ ನಿವೇಶನಕ್ಕಾಗಿ ನನ್ನ ಅಣ್ಣಂದಿರ ಸಹಾಯದಿಂದ ಹುಡುಕಾಟಕ್ಕೆ ಶುರು ಮಾಡಿದೆ, ಆಗ ನನ್ನ ಅಣ್ಣ ವಿಜಯ ಬಾಬು ರವರು ಹೆಚ್ಚ.ಎಸ್ ಗಾರ್ಡನ್ ನಲ್ಲಿ ವಾಸಿಸುತ್ತಿದ್ದರು. ನಾವುಗಳು ವಾಸವಾಗಿದ್ದಿದ್ದು ಕಂದವಾರದ ಬಾಗಿಲಿನಲ್ಲಿರುವ ಮುನಿಸಿಪಲ್ ಕ್ವಾರ್ಟಸ್ ನಲ್ಲಿ 1974ರಿಂದ ಅಲ್ಲಿಯೇ ವಾಸಿಸುತ್ತಿದ್ದೆವು. ನನ್ನ ವ್ಯಾಸಂಗ ಬಹುತೇಕ ಚಿಕ್ಕಬಳ್ಳಾಪುರದಲ್ಲೇ ಮುಗಿಸಿ ನಾನು ದೇವರ ಕೃಪೆಯಿಂದ ISRO Satellite Center ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಬಾಹ್ಯಾಕಾಶ ವೈಜ್ಞಾನಿಕ ಸಂಶ್ಥೆಯಲ್ಲಿ ನೌಕರನಾಗಿ 1983 ರಿಂದ ಸೇವೆ ಸಲ್ಲಿಸುತ್ತಿದ್ದೇನೆ.

ಬ್ಲಾಕ್ ಇಮೇಜ್

2011 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣಗೊಂಡಿದ್ದ ವಿನಾಯಕ ಬಡಾವಣೆಯಲ್ಲಿ ಒಂದು ನಿವೇಶನವನ್ನು ನೋಡುವ ಸಲುವಾಗಿ ಕೆಳಗಿನ ತೋಟದಲ್ಲಿ ನಡೆದಾಡುವಾಗ ಅಕಸ್ಮಾತ್ ನನ್ನ ದೃಷ್ಟಿ ಎದುರಿಗೆ ಕಾಣುವ ಸ್ಕಂದಗಿರಿ ಬೆಟ್ಟದ ಕಡೆ ಹಾಯಿಸಿದಾಗ ಆಶ್ಚರ್ಯ ಎಂಬಂತೆ ಬೆಟ್ಟದಲ್ಲಿ ನನಗೆ ಶ್ರೀಗಣೇಶನ ಆಕಾರ ಕಂಡುಬಂದಿತ್ತು ಆಗ ನಾನು ನನ್ನ ಕ್ಯಾಮರಾವನ್ನು ನನ್ನೊಂದಿಗೆ ಸದಾ ಇಟ್ಟುಕೊಳ್ಳುತ್ತಿದ್ದೆ, ಆಗಿಂದ್ದಾಗ್ಗೆ ನಾನು ಕೆಲವು ಛಾಯಚಿತ್ರಗಳನ್ನು ತೆಗೆದೆ.

ಬ್ಲಾಕ್ ಇಮೇಜ್

ಸುಮಾರು 35 ವರ್ಷಗಳ ವರೆಗೆ ಸ್ಕಂದಗಿರಿ ಹಾಗು ನಂದಿಗಿರಿ ಬೆಟ್ಟಗಳ ನೋಡುತ್ತಿದ್ದರೂ ಈ ಅನುಭವ ಆಗಿರಲಿಲ್ಲ. ನನಗೆ ಆಶ್ಚರ್ಯ ಹಾಗು ಕುತೂಹಲದಿಂದ ಸ್ಕಂದಗಿರಿಯ ಛಾಯಾಚಿತ್ರಗಳನ್ನು ತೆಗೆದು ನನ್ನಲ್ಲೇ ನಾನು ಶ್ರೀಗಣೇಶನ ಆಕೃತಿ ಬೆಟ್ಟದಲ್ಲಿ ಮೂಡಿದೆಯೆಂದು ದೃಡಪಡಿಸಿಕೊಂಡೆ. ಈ ಸಂಗತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡೆ, ಕೆಲವರು ನಂಬಿದರು, ಇನ್ನು ಕೆಲವರು ಇದು ಕೇವಲ ನಿನ್ನ ಊಹೆ ಎಂದರು, ಆದರೆ ನನ್ನ ಕುತೂಹಲ ಅಲ್ಲಿಗೆ ತಣಿಯಲಿಲ್ಲ, ಇನ್ನೇನಾದರೂ ವಿಶೇಷ ಸಂಗತಿ ಸಿಗಬಹುದೆಂದು ಗೂಗಲ್ ಮ್ಯಾಪನಲ್ಲಿ ಮೊಬೈಲಲ್ಲಿ ಸ್ಕಂದಗಿರಿ ಬೆಟ್ಟದ ಆಸುಪಾಸಿನಲ್ಲಿ ಹುಡುಕಲಾರಂಭಿಸಿದೆ. ನನ್ನ ಕುತೂಹಲಕ್ಕೆ ಆಶ್ಚರ್ಯ ಎಂಬಂತೆ ಆಕೃತಿಯೊಂದು ಗೊಚರಿಸಲಾರಂಭಿಸಿತು ಶ್ರೀ ಗಣೇಶನ ಆಕೃತಿಗೆ ಹೊಂದಿಕೊಂಡಂತೆ ಒಂದು ಮನುಷ್ಯನ ಆಕೃತಿ ನರಸಿಂಹನ ಮುಖವನ್ನು ಹೊಂದಿರುವಂತೆ ಗೊಚರಿಸಲಾಂಬಿಸಿತು.

ಬ್ಲಾಕ್ ಇಮೇಜ್

ಆಗಿನಿಂದ ನಾನು ಇಲ್ಲಿನವರೆಗೆ ನನಗೆ ಸ್ಕಂದಗಿರಿಯಲ್ಲಿ ಕೇವಲ ಶ್ರೀಗಣೇಶ ಹಾಗು ನರಸಿಂಹ ಸ್ವಾಮಿಯೇ ಸದಾಕಾಲ ದರ್ಶನಕೊಡುತ್ತಿದ್ದಾರೆ. ಸ್ಕಂದಗಿರಿ ಶ್ರೀಗಣೇಶನ ದರ್ಶನವಾದನಂತರ ನನಗೆ ಕುತೂಹಲ ಹೆಚ್ಚಾಯಿತು ಯಾವುದೇ ಬೆಟ್ಟಗುಡ್ಡಗಳನ್ನು ನೋಡಿದರೂ ಹೆಚ್ಚಿನ ಆಸಕ್ತಿಯಿಂದ ವೀಕ್ಷಿಸಲಾರಂಬಿಸಿದೆ ಹಾಗು ಯಾವುದೇ ವಿಶೇಷ ಲೇಖನಗಳು ಪತ್ರಿಕೆಗಳಲ್ಲಿ ಬಂದರೂ ಆಸಕ್ತಿಯಿಂದ ಓದಲಾರಂಭಿಸಿದೆ. 2019ರಲ್ಲಿ ನಿವೃತ್ತನಾದ ನಾನು ಚಿಕ್ಕಬಳ್ಳಾಪುರದ ಕೆಳಗಿನ ತೋಟದಲ್ಲಿ ನಿವೇಶನಕೊಂಡು ಮನೆ ಕಟ್ಟಿ ವಸಿಸಲಾರಂಭಿಸಿದೆ. ನನ್ನ ಪುಣ್ಯ ಹಾಗು ದೇವರ ಕೃಪೆಯಿಂದ ನನ್ನ ಮನೆ ಮಹಡಿಯಿಂದ ಸ್ಕಂದಗಿರಿ ಬೆಟ್ಟವನ್ನು ವೀಕ್ಷಿಸುವ ಭಾಗ್ಯ ನನ್ನದಾಯಿತು. ನಾನು ಪ್ರತಿದಿನ ಬೆಳಗ್ಗೆ ಸಮಯ ಶ್ರೀಗಣೇಶ ಹಾಗು ಶ್ರೀ ನರಸಿಂಹಸ್ವಾಮಿಗೆ ನನ್ನ ನಮನಗಳನ್ನು ಸಲ್ಲಿಸುತ್ತಾ ಬಂದೆ. ಹಾಗೆ ದಿನವೂ ವೀಕ್ಷಿಸುವಾಗ ಮಾರ್ಚ್ 26, 2024 ರಲ್ಲಿ ಕದರಿ ಹುಣ್ಣಿಮೆ (ನರಸಿಂಹ ಸ್ವಾಮಿ ಹುಣ್ಣಿಮೆ) ದಿನ ಬೆಳಗಿನಜಾವ ಸುಮಾರು ಆರು ಗಂಟೆ ಸಮಯದಲ್ಲಿ ಹುಣ್ಣಿಮೆ ಚಂದ್ರನು ನೇರವಾಗಿ ಅಂದರೆ ಸ್ಕಂದಗಿರಿ ಬೆಟ್ಟದ ಮೇಲೆ ಕಂಡುಬಂದಿತು. ಈ ವಿಶೇಷವನ್ನು ನಾನು ಆಶ್ಚರ್ಯದಿಂದ ನನ್ನ ಸ್ನೇಹಿತರಾದ ಚಂದ್ರಶೇಖರ್ ಅವರೊಂದಿಗೆ ಹಂಚಿಕೊಂಡೆ, ಅವರು ಕೂಡ ಆಶ್ಚರ್ಯದೊಂದಿಗೆ ನನ್ನೊಡನೆ ಸ್ಫಂದಿಸಿದರು.

ಬ್ಲಾಕ್ ಇಮೇಜ್

ಸ್ಕಂದಗಿರಿ ಬೆಟ್ಟದಲ್ಲಿ (ಸುಬ್ರಮಣ್ಯ) ಹಾಗು ಶ್ರೀ ನರಸಿಂಹಸ್ವಾಮಿಯವರ ಸಂಗಮ ಹಾಗೇ ಯೋಚಿಸುವಾಗ ನನ್ನ ಮನಸಿಗೆ ಹೊಳೆದದ್ದು ಘಾಟಿ ಸುಬ್ರಮಣ್ಯ ಕ್ಷೇತ್ರ. ಅಲ್ಲಿ ಇರುವ ವಿಗ್ರಹದಲ್ಲಿ ಮುಂಬಾಗದಲ್ಲಿ ಶ್ರೀ ಸುಬ್ರಮಣ್ಯ ಹಾಗು ಕನ್ನಡಿಯಲ್ಲಿ ದರ್ಶನವಾಗುವ ಶ್ರೀನರಸಿಂಹಸ್ವಾಮಿ ಅಂದರೆ ಒಂದೇ ವಿಗ್ರಹದಲ್ಲಿ ಶ್ರೀಸುಬ್ರಹ್ಮಣ್ಯ ಹಾಗು ಶ್ರೀನರಸಿಂಹ ಸ್ವಾಮಿಯ ದರ್ಶನ. ಈ ವಿಗ್ರಹ ಸ್ಕಂದಗಿರಿಯ ಪ್ರತಿರೂಪವಾಗಿರಬಹುದೆಂದು ನನ್ನ ಅನಿಸಿಕೆ.

ಬ್ಲಾಕ್ ಇಮೇಜ್

ನಮ್ಮ ಸಂಸ್ಕೃತಿಯಲ್ಲಿ ಬರುವ ಪ್ರಸಿದ್ಧ ನಗರಗಳೆಲ್ಲವೂ ನದಿ ತೀರದಲ್ಲಿ ಪ್ರವರ್ಧಮಾನಕ್ಕೆ ಬಂದಿರುವುದು ಇಂದಿಗೂ ಕೂಡ ಆ ನಗರಗಳೆಲ್ಲವೂ ತಮ್ಮ ಮಹತ್ವವನ್ನು ಉಳಿಸಿಕೊಂಡಿವೆ, ಹಾಗೆಯೆ ಪುರಾಣ ಪ್ರಸಿದ್ಧ ಬೆಟ್ಟಗಳು ಸಹ ತಮ್ಮದೇ ಆದ ವಿಶಿಷ್ಟ ಹಾಗು ಧಾರ್ಮಿಕ ಕ್ಷೇತ್ರಗಳಾಗಿ ಮುಂದುವರೆದಿವೆ. ದಕ್ಷಿಣ ಭಾರತವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡು ಬರುವ ಅಂಶವೆಂದರೆ ಸಾಲು ಬೆಟ್ಟಗಳು ಅಂದರೆ ಪಶ್ಷಿಮ ಬೆಟ್ಟಗಳ ಸಾಲು ಹಾಗು ಪೂರ್ವದಲ್ಲಿ ಬರುವ ಬೆಟ್ಟಗಳ ಶ್ರೇಣಿ ಹಾಗು ಮಧ್ಯಭಾರತದಲ್ಲಿ ಬರುವ ವಿಂಧ್ಯ ಪರ್ವತಗಳು. ಈ ಮೂರು ಬೆಟ್ಟಗಳ ಶ್ರೇಣಿಯ ಮದ್ಯಭಾಗದಲ್ಲಿ ಬರುವ ದಕ್ಷಿಣ ಭಾರತ ಅತ್ಯಂತ ಸುರಕ್ಷಿತ ಹಾಗು ಪೌರಾಣಿಕ ಪ್ರಸಿದ್ಧವಾದ ಭೂಭಾಗ. ಕವಿಯ ವಾಣಿಯಂತೆ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ.

ಬ್ಲಾಕ್ ಇಮೇಜ್

ಈ ಬೆಟ್ಟ ಹಾಗು ಗುಡ್ಡಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬರುವ ಸಂಗತಿಯೆಂದರೆ ಒಂದರಂತೆ ಮತ್ತೊಂದಿಲ್ಲ, ಎಲ್ಲವೂ ವಿಭಿನ್ನ ಮತ್ತು ತನ್ನದೇ ಆದ ಲಕ್ಷಣಗಳನ್ನು ಹಾಗು ವಿಶೇಷತೆಗಳನ್ನು ಹೊಂದಿವೆ. ಸಾಮಾನ್ಯವಾಗಿ ಎಲ್ಲಾ ನದಿಗಳ ಉಗಮಸ್ಥಾನ ಬೆಟ್ಟ ಹಾಗು ಪರ್ವತಗಳು ಮಳೆನೀರನ್ನು ಹಿಡಿದಿಟ್ಟು ವರ್ಷವಿಡೀ ಸಿಹಿ ನೀರನ್ನು ಒದಗಿಸುವ ತಾಣಗಳು, ಯಾವ ಬೆಟ್ಟ ಶ್ರೇಣೀಗಳು ಮಳೆ ನೀರನ್ನು ಹಿಡಿದಿಟ್ಟು ವರ್ಷವಿಡೀ ಹಸಿರನ್ನು ಪೋಷಿಸುತ್ತಿದೆಯೋ ಅವು ಇಂದಿಗೂ ನದಿಗಳ ಉಗಮಸ್ಥಾನಗಳಾಗಿ ಉಳಿದುಕೊಂಡಿವೆ. ಮಳೆ ಪ್ರಮಾಣ ಕಡಿಮೆಯಾದ್ದರಿಂದಲೊ ಅಥವಾ ನಾಗರೀಕತೆಯ ಪ್ರಭಾವದಿಂದಲೋ ಬಹಳಷ್ಟು ಬೆಟ್ಟ ಗುಡ್ಡಗಳು ಬೋಳು ಗುಡ್ಡಗಳಾಗಿ ಪರಿವರ್ತಿತವಾಗಿ ನದಿಗಳ ಉಗಮ ಸ್ಥಾನ ಬರಿದಾಗಿದೆ (ಬತ್ತಿಹೋಗಿವೆ).

ಬ್ಲಾಕ್ ಇಮೇಜ್

26-03-2024 ರ ಕದರಿ ಹುಣ್ಣಿಮೆದಿನ ಪೂರ್ಣಚಂದ್ರನನ್ನು ಸ್ಖಂದಗಿರಿಯ ಶಿರ ಬಾಗದಲ್ಲಿ ವೀಕ್ಷಿಸಿದ ನಾನು ಮುಂದಿನ ಕದರಿ ಹುಣ್ಣಿಮೆ ಅಥವಾ ನರಸಿಂಹ ಸ್ವಾಮಿ ಹುಣ್ಣಿಮೆಗಾಗಿ ಕಾಯುತ್ತಿದ್ದೆ, ಆದಿನ ಬಂದಿತು ಅಂದರೆ 14-03-2025ರಂದು ಕಾತುರದಿಂದ ಕಾಯುತ್ತಿದ್ದೆ ಅಂದು 15-03-2025 ರಂದು ಬೆಳಗಿನಜಾವ ಸುಮಾರು 5:00 ಗಂಟೆಗೆ ವೀಕ್ಷಿಸಿದಾಗ ಹಾಗೆಯೇ ಅಂದರೆ ಪೂರ್ಣಚಂದ್ರನು ಸ್ಕಂದಗಿರಿಯ ಬೆಟ್ಟದ ಶಿರ ಭಾಗಕ್ಕೆ ಸಮೀಪಿಸಿತು ನಾನು ನನ್ನು ಮಿತ್ರರಾದ ಶ್ರೀಚಂದ್ರಶೇಖರ್ ರವರ ಮನೆ, ವಿನಾಯಕ ಬಡಾವಣೆಯಲ್ಲಿ ಸಮೀಪಿಸಿದಾಗ ಅವರ ಗಮನಕ್ಕೆ ತಂದೆ. ಆಗ ನಾವುಗಳು ಈ ಘಟನೆಯನ್ನು ವೀಖ್ಷಿಸಿದೆವು ಹಾಗು ಛಾಯಾ ಚಿತ್ರಗಳನ್ನು ತೆಗೆದಕೊಂಡೆವು. ಆ ಕ್ಷಣಗಳು ಅತ್ಯಂತ ರೋಮಾಂಚನದ ಕ್ಷಣಗಳಾಗಿದ್ದವು. ಪ್ರಕೃತಿಯಲ್ಲಿ ಕೆಲವು ಘಟನೆಗಳು ಹಾಉ ಕೌತುಕಗಳಿಗೆ ವಿಜ್ಞಾನದಲ್ಲಿಯೂ ಸಹ ಸರಿಯಾದ ಉತ್ತರಗಳಿಲ್ಲ, ಕೆಲವೊಂದು ಕಾರಣಗಳು ಊಹಾ ಪೋಹಗಳಷ್ಟೆ. ಸಮುದ್ರ ತೀರದಲ್ಲಿರುವ ರಾಮೇಶ್ವರ ಕ್ಷೇತ್ರದಲ್ಲಿರುವ 21 ಬಾವಿಗಳಲ್ಲಿ ವಿವಿಧವಾದ ರುಚಿ ಹಾಗು ವಿವಿಧ ಉಷ್ಣಾಂಶವಿರುವುದು ಕಂಡುಬರುತ್ತದೆ. ಬಹುಶಃ ಇದಕ್ಕೆ ಕಾರಣ ಅವುಗಳ ಉಗಮಸ್ಥಾನದಲ್ಲಿರುವ ವಿವಿಧ ಪ್ರಕಾರದ ರಚನೆ ಹಾಗು ಅಲ್ಲಿನ ಬಂಡೆಗಳ ಗುಣಮಟ್ಟವಿರಬಹುದು.

ಬ್ಲಾಕ್ ಇಮೇಜ್